20/08/2026
🌺 ವರಮಹಾಲಕ್ಷ್ಮಿ ಹಬ್ಬ – “ಕುಂಕುಮದ ಮಹತ್ವ” 🌺
ವರಮಹಾಲಕ್ಷ್ಮಿ ಹಬ್ಬ ಎಂದರೆ ನಮ್ಮ ಮನೆಗಳಲ್ಲಿ ಸಂಭ್ರಮ, ಭಕ್ತಿ ಮತ್ತು ಸಡಗರ.
ಮನೆಯಲ್ಲಿ ಲಕ್ಷ್ಮೀ ದೇವಿಯ ವಿಗ್ರಹವನ್ನು ಪ್ರತಿಷ್ಠಾಪಿಸಿ, ಅಕ್ಕಪಕ್ಕದ ಹೆಂಗೆಳೆಯರನ್ನು ಆಹ್ವಾನಿಸಿ, ಅವರಿಗೆ ಅರಿಶಿನ–ಕುಂಕುಮ ನೀಡಿ, ಸಿಹಿ ಹಂಚಿ ಹಬ್ಬವನ್ನು ಆಚರಿಸುವುದು ನಮ್ಮಲ್ಲಿನ ಸುಂದರವಾದ ಸಂಪ್ರದಾಯ.
ನಮ್ಮ ಭಾಗದಲ್ಲಿ ಬಹುತೇಕ ಎಲ್ಲಾ ಹೆಣ್ಣುಮಕ್ಕಳೂ ಅತ್ಯಂತ ಶ್ರದ್ಧೆಯಿಂದ ಆಚರಿಸುವ ಹಬ್ಬ ಇದು.
ಆದರೆ ಈ ಹಬ್ಬವನ್ನು ಆಚರಿಸುವ ರೀತಿಗಳು ಮಾತ್ರ ಹಲವು…
ಕೆಲವರಿಗೆ ದೇವರಿಗೆ ಎಷ್ಟು ಸುಂದರವಾಗಿ ಶೃಂಗಾರ ಮಾಡಬಹುದು ಎಂಬ ಆಸಕ್ತಿ.
ಕಳೆದ ವರ್ಷಕ್ಕಿಂತ ಈ ವರ್ಷ ಯಾವ ರೀತಿಯಲ್ಲಿ ವಿಭಿನ್ನವಾಗಿ ಅಲಂಕಾರ ಮಾಡಬಹುದು ಎಂಬ ಉತ್ಸಾಹ.
ಇನ್ನು ಕೆಲವರಿಗೆ ತಮ್ಮಲ್ಲಿರುವ ಐಶ್ವರ್ಯ, ಒಡವೆ–ವೈಡೂರ್ಯಗಳನ್ನು ಪ್ರದರ್ಶಿಸುವ ಸಂದರ್ಭ.
ಮತ್ತೆ ಕೆಲವರಿಗೆ,
“ಅವರು ಮಾಡುತ್ತಿದ್ದಾರೆ… ನಾವೂ ಕೂಡ ನಾಮ್ ಕೆ ವಾಸ್ತೆ ಮಾಡೋಣ…”
ಎಂಬ ಮನೋಭಾವ.
ಇತ್ಯಾದಿ… ಇತ್ಯಾದಿ…
ಆದರೆ ಇಂತಹ ವಿಶೇಷವಾದ ಹಬ್ಬದ ಆಚರಣೆಯಲ್ಲಿ ನಾವು ಇತರರಿಗೆ ನೀಡುವ ಕುಂಕುಮ ಎಷ್ಟು ಪರಿಶುದ್ಧವಾಗಿದೆ? ಎಂಬ ಪ್ರಶ್ನೆಯನ್ನು ನಾವೆಂದಾದರೂ ಕೇಳಿಕೊಂಡಿದ್ದೇವೆಯೇ?
❓ ಕೆಂಪು ಬಣ್ಣ ಇದ್ದರೆ ಅದು ಕುಂಕುಮವೇ?
ಕುಂಕುಮ ಕೆಂಪಾಗಿದ್ದರೆ ಅದು ಒಳ್ಳೆಯ ಕುಂಕುಮವೇ?
ಕಡುಗೆಂಪು ಬಣ್ಣ ಇದ್ದರೆ ಅದು ಪರಿಶುದ್ಧವೇ?
ಗಾಢ ಕೆಂಪು ಬಣ್ಣ ಇದ್ದರೆ ಅದು ಉತ್ತಮವೇ?
ದೇವಸ್ಥಾನದಲ್ಲಿ ಸಿಗುವ ಕುಂಕುಮ ಮಾತ್ರ ಒಳ್ಳೆಯದೇ?
ಅರ್ಚನೆಗೆ ಬಳಸುವ ಕುಂಕುಮ ಪರಿಶುದ್ಧವೇ?
ಚಿಕ್ಕಂದಿನಲ್ಲಿ ಅಮ್ಮ ಗ್ರಂಥಿಗೆ ಅಂಗಡಿಗೆ ಕಳುಹಿಸಿ,
“ಪಂಡರಾಪುರದ ಕುಂಕುಮ ತೆಗೆದುಕೊಂಡು ಬಾ…”
ಎಂದು ಹೇಳುತ್ತಿದ್ದರು.
ಅದು ನಿಜವಾಗಿಯೂ ಪರಿಶುದ್ಧ ಕುಂಕುಮವಾಗಿತ್ತೇ?
ಹೀಗೆ ನೂರೆಂಟು ಪ್ರಶ್ನೆಗಳು ನಮ್ಮ ಮನಸ್ಸಿನಲ್ಲಿ ಮೂಡುತ್ತವೆ.
🌿 ನನಗೆ ಉತ್ತರ ಸಿಕ್ಕಿದ್ದು ಹೇಗೆ?
“ಕುಂಕುಮದಿಂದ ಕ್ರಾಂತಿ” – ಏ.ಪಿ. ಚಂದ್ರಶೇಖರ್ ಗುರುಗಳು ಬರೆದಿರುವ ಪುಸ್ತಕವನ್ನು ಓದಿದ ನಂತರ ಕುಂಕುಮದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಆಸಕ್ತಿ ಮೂಡಿತು.
ನಾವೂ ಕೂಡ ಸಾಂಪ್ರದಾಯಿಕ ರೀತಿಯಲ್ಲಿ ಕುಂಕುಮ ತಯಾರಿಸಬಹುದು ಎಂಬ ವಿಚಾರ ನನಗೆ ತಿಳಿದದ್ದು Bhat 'n' Bhat ಅವರ YouTube ವಿಡಿಯೋ ನೋಡಿದ ನಂತರ.
ನಮ್ಮ ಗುಡಿ ಕೈಗಾರಿಕೆಯಲ್ಲಿ ಇದೇ ರೀತಿಯ ವಿಧಾನದಲ್ಲಿ ಸುಮಾರು ಮೂರು ವರ್ಷಗಳಿಂದ ಕುಂಕುಮವನ್ನು ತಯಾರಿಸುತ್ತಿದ್ದೇವೆ.
🌿 ಕುಂಕುಮದ ಪ್ರಮುಖ ಕಚ್ಚಾ ವಸ್ತುಗಳು
ಸಾಂಪ್ರದಾಯಿಕ ಕುಂಕುಮ ತಯಾರಿಕೆಯಲ್ಲಿ ಬಳಸುವ ಪ್ರಮುಖ ವಸ್ತುಗಳಲ್ಲಿ:
• ಅರಿಶಿನ
• ನಿಂಬೆ ರಸ / ಸುಣ್ಣದ ತಿಳಿ
• ಬಿಳಿಗಾರ (Borax)
• ಪಟಿಕ (Alum)
• ಕೊಬ್ಬರಿ ಎಣ್ಣೆ / ನಾಟಿ ಹಸುವಿನ ತುಪ್ಪ
ಮುಂತಾದವುಗಳಿವೆ.
🌼 ಅರಿಶಿನ
ಅರಿಶಿನ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಆಹಾರದಿಂದ ಹಿಡಿದು ಪೂಜೆಯವರೆಗೆ ಬಹಳ ಮಹತ್ವ ಪಡೆದಿರುವ ವಸ್ತು.
ಅರಿಶಿನದಲ್ಲಿರುವ ಕರ್ಕ್ಯುಮಿನ್ ಎಂಬ ಅಂಶದ ಬಗ್ಗೆ ವಿಜ್ಞಾನದಲ್ಲಿ ವ್ಯಾಪಕವಾಗಿ ಅಧ್ಯಯನಗಳು ನಡೆದಿವೆ.
ಅದಕ್ಕಾಗಿಯೇ ನಾವು ಅರಿಶಿನ ಕೊಳ್ಳಲು ಹೋದಾಗ,
“ಅಡಿಗೆ ಅರಿಶಿನ ಬೇಕಾ? ದೇವರಿಗೆ ಬೇಕಾ?”
ಎಂದು ಕೇಳುವುದನ್ನು ಗಮನಿಸಿದ್ದೇವೆ.
ಮಣ್ಣಿನಲ್ಲಿ ಬೆಳೆಯುವುದು ಒಂದೇ ಅರಿಶಿನ.
ಹಾಗಿದ್ದರೆ ಈ ಎರಡು ವಿಧಗಳ ನಡುವಿನ ವ್ಯತ್ಯಾಸವೇನು?
ಇದರ ಬಗ್ಗೆ ನಾವು ಆಲೋಚಿಸಬೇಕಲ್ಲವೇ?
🍋 ನಿಂಬೆ ರಸ
ನಿಂಬೆ ರಸದಲ್ಲಿರುವ ಆಮ್ಲೀಯ ಅಂಶಗಳು ಅರಿಶಿನದಲ್ಲಿರುವ ವರ್ಣದ್ರವ್ಯದೊಂದಿಗೆ ಪ್ರತಿಕ್ರಿಯಿಸಿ ಅದರ ಬಣ್ಣದಲ್ಲಿ ಬದಲಾವಣೆ ತರಲು ಸಹಾಯ ಮಾಡುತ್ತವೆ.
🌿 ಬಿಳಿಗಾರ / Borax
ಸಾಂಪ್ರದಾಯಿಕ ಕುಂಕುಮ ತಯಾರಿಕೆಯಲ್ಲಿ ಬಿಳಿಗಾರವನ್ನು ಕ್ಷಾರೀಯ ಏಜೆಂಟ್ ಆಗಿ ಬಳಸಲಾಗುತ್ತದೆ. ಇದು ಅರಿಶಿನದ ವರ್ಣದ್ರವ್ಯದೊಂದಿಗೆ ಪ್ರತಿಕ್ರಿಯಿಸಿ ಬಣ್ಣವನ್ನು ಬದಲಾಯಿಸುವ ಪ್ರಕ್ರಿಯೆಯಲ್ಲಿ ಪಾತ್ರವಹಿಸುತ್ತದೆ.
🌿 ಪಟಿಕ / Alum
ಪಟಿಕವೂ ಸಾಂಪ್ರದಾಯಿಕ ಕುಂಕುಮ ತಯಾರಿಕೆಯಲ್ಲಿ ಬಳಸುವ ಒಂದು ಘಟಕ. ಅರಿಶಿನದ ವರ್ಣದ್ರವ್ಯದೊಂದಿಗೆ ನಡೆಯುವ ರಾಸಾಯನಿಕ ಬದಲಾವಣೆಯಲ್ಲಿ ಇದು ಸಹಾಯಕವಾಗುತ್ತದೆ.
🥥 ಕೊಬ್ಬರಿ ಎಣ್ಣೆ
ಕುಂಕುಮವನ್ನು ಹಣೆಗೆ ಹಚ್ಚಿದಾಗ ಅದು ಸುಲಭವಾಗಿ ಅಂಟಿಕೊಳ್ಳಲು ಹಾಗೂ ಚರ್ಮದ ಮೇಲೆ ಸರಾಗವಾಗಿ ಹರಡಲು ಎಣ್ಣೆ ಸಹಾಯ ಮಾಡುತ್ತದೆ.
________________________________________
🙏 ಹಾಗಾದರೆ ನಾವು ಬಳಸುವ ಕುಂಕುಮದ ಬಗ್ಗೆ ಒಮ್ಮೆ ಯೋಚಿಸೋಣ…
ದೇವರ ಅರ್ಚನೆಗೆ ಬಳಸುವ ಕುಂಕುಮದಲ್ಲೂ ಕಲಬೆರಕೆ ಇರಬಹುದೇ?
ನಾವು ಪ್ರತಿದಿನ ಹಣೆಗೆ ಹಚ್ಚಿಕೊಳ್ಳುವ ಕುಂಕುಮದಲ್ಲೂ ಕಲಬೆರಕೆ ಇರಬಹುದೇ?
“ಅಯ್ಯೋ ಶಿವನೇ… ಕುಂಕುಮದ ಬಗ್ಗೆಯೂ ಇಷ್ಟೊಂದು ವಿಷಯಗಳಿವೆಯೇ?”
ಹೌದು!
----------------------------------------------------------------------------------------------------------------
ಪುಸ್ತಕದಿಂದ ನನಗೆ ಮೆಚ್ಚುಗೆಯಾದ ಒಂದು ಪ್ಯಾರಾ ಇಲ್ಲಿ ಉಲ್ಲೇಖಿಸುತ್ತಿದ್ದೇನೆ:
ಕುಂಕುಮದಿಂದ ಕ್ರಾಂತಿ ಏ.ಪಿ.ಚಂದ್ರಶೇಖರ್ ಗುರುಗಳು ಬರೆದ ಪುಸ್ತಕ ಅದರಲ್ಲಿನ ಉಲ್ಲೇಖ
ಹಣೆಯ ಮೇಲಿಟ್ಟ ಕುಂಕುಮ ಮದನಾರಿಯ ಮೂರನೇ ಕಣ್ಣಂತೆ:
ಕಾಮವು ಪ್ರಕೃತಿ ಸಹಜವಾದದ್ದು(ಆದರದು ಧರ್ಮ ಮಾರ್ಗದಲ್ಲಿರಬೇಕು) ಪರಸ್ಪರ ಗಂಡು - ಹೆಣ್ಣು ಆಕರ್ಷಣೆ ಸಾಮಾನ್ಯವಾದದ್ದು,ಹೀಗಿರುತ್ತಾ ಕಣ್ಣಿಗೆ ಕಣ್ಣುಕೊಟ್ಟು ನೋಡುವಾಗ,ಮಾತನಾಡುವಾಗ,ಲೋಕಧರ್ಮವನ್ನು ಮೀರಿ ಅನರ್ಥಕಾರಿ ಕಾಮವು ಉತ್ತೇಜಿತವಾಗುವ ಅಪಾಯವಿದೆ. ಈ ಅಪಾಯವನ್ನು ತಪ್ಪಿಸುವ ದೃಷ್ಟಿ ಬೊಟ್ಟು ಕುಂಕುಮ.ನಮ್ಮ ನೋಟವನ್ನು ಬೇರೆಡೆ ಸೆಳೆಯುವ ಉಪಾಯ ಕುಂಕುಮ.ಹಾಗಲ್ಲವಾದರೆ ಅಪಾಯವಿದೆ.ನನ್ನ ಮೂರನೇ ಕಣ್ಣಿಗೆ ನಿನ್ನ ಕಾಮವನ್ನು ಸುಡುವ ಸಾಮರ್ಥ್ಯ ಇದೆ ಎಂಬ ಎಚ್ಚರಿಕೆಯೂ ಹೌದು ಈ ಕುಂಕುಮ. ________________________________________
🌱 ನಮ್ಮ ಗುಡಿ ಕೈಗಾರಿಕೆಯಲ್ಲಿ ತಯಾರಿಸಿದ ಕುಂಕುಮ
ನಮ್ಮ ಗುಡಿ ಕೈಗಾರಿಕೆಯಲ್ಲಿ ಮೇಲೆ ತಿಳಿಸಿದ ಸಾಂಪ್ರದಾಯಿಕ ವಿಧಾನದಲ್ಲಿ ಸುಮಾರು ಮೂರು ವರ್ಷಗಳಿಂದ ಕುಂಕುಮವನ್ನು ತಯಾರಿಸುತ್ತಿದ್ದೇವೆ.
ಇಂದು ಕೆಲವರು ಇದನ್ನು:
🙏 ಹಣೆಗೆ ತಿಲಕ ಇಡಲು
🙏 ದೇವರ ಪೂಜೆಗೆ
🙏 ಮದುವೆ ಸಮಾರಂಭಗಳಿಗೆ
🙏 ಶುಭ ಸಮಾರಂಭಗಳಿಗೆ
ಕೇಳಿ ಪಡೆದುಕೊಳ್ಳುತ್ತಿದ್ದಾರೆ.
ಈ ವರಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ನಾವು ಕೊಡುವ ಕುಂಕುಮದ ಬಗ್ಗೆಯೂ ಒಮ್ಮೆ ಯೋಚಿಸೋಣ.
ಬಣ್ಣ ನೋಡಿಕೊಂಡು ಮಾತ್ರ ಕುಂಕುಮವನ್ನು ಆಯ್ಕೆ ಮಾಡದೆ, ಅದರ ತಯಾರಿಕೆಯ ಬಗ್ಗೆ ತಿಳಿದುಕೊಂಡು ಬಳಸೋಣ.
ನಮ್ಮ ಸಂಪ್ರದಾಯವನ್ನು ಆಚರಿಸುವುದರ ಜೊತೆಗೆ, ಅದರ ಹಿಂದಿರುವ ಜ್ಞಾನವನ್ನೂ ಮುಂದಿನ ಪೀಳಿಗೆಗೆ ಪರಿಚಯಿಸೋಣ. 🌿
🌺 ಪರಿಶುದ್ಧ ಸಂಪ್ರದಾಯಕ್ಕೆ ಪರಿಶುದ್ಧ ಅರಿವು 🌺
ಕುಂಕುಮ ಬೇಕಿದ್ದರೆ ಸಂಪರ್ಕಿಸಿ:
📞 7891011554
ಅಥವಾ
📲 Farm2Me App ಮೂಲಕ ಆರ್ಡರ್ ಮಾಡಿ
https://farm2me.in/
🙏 ಈ ವರಮಹಾಲಕ್ಷ್ಮಿ ಹಬ್ಬವು ನಿಮ್ಮ ಮನೆಗೆ ಆರೋಗ್ಯ, ಸಂತೋಷ, ಸಮೃದ್ಧಿ ಮತ್ತು ನೆಮ್ಮದಿಯನ್ನು ತರಲಿ.
ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು! 🌺🙏