05/06/2026
ನಾಡಿನ ಖ್ಯಾತ ಉದ್ಯಮಿ ಹಾಗೂ VRL ಸಮೂಹ ಸಂಸ್ಥೆಗಳ ರೂವಾರಿಗಳಾದ ಸನ್ಮಾನ್ಯ ಶ್ರೀ ವಿಜಯ ಸಂಕೇಶ್ವರ ಅವರು ಇಂದು ಸಕುಟುಂಬ ಸಮೇತರಾಗಿ ನಮ್ಮ ಗೋಶಾಲೆಗೆ ಆಗಮಿಸಿದ್ದು ನಮಗೆಲ್ಲರಿಗೂ ಅತ್ಯಂತ ಸಂತಸದ ವಿಷಯ.
ವಿಶೇಷವೆಂದರೆ, ನಮ್ಮ ನೆಚ್ಚಿನ ನಾಯಕರಾದ ಸನ್ಮಾನ್ಯ ಶ್ರೀ ಬಸನಗೌಡ ಪಾಟೀಲ್ ಯತ್ನಾಳ್ ಅವರು ಖುದ್ದಾಗಿ ವಿಜಯ ಸಂಕೇಶ್ವರ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಗೋಶಾಲೆಯ ಪ್ರತಿಯೊಂದು ವಿಭಾಗವನ್ನೂ ಸ್ವತಃ ತಾವೇ ನಿಂತು ವೀಕ್ಷಣೆ ಮಾಡಿಸಿ, ಗೋಮಾತೆಯ ಆರೈಕೆ ಮತ್ತು ನಿರ್ವಹಣೆಯ ಬಗ್ಗೆ ಅವರಿಗೆ ಸಂಪೂರ್ಣವಾಗಿ ವಿವರಿಸಿದರು.
ಗೋಶಾಲೆಯನ್ನು ಅತ್ಯಂತ ಆಸಕ್ತಿಯಿಂದ ವೀಕ್ಷಿಸಿದ ವಿಜಯ ಸಂಕೇಶ್ವರ ಅವರು ತೀವ್ರ ಮೆಚ್ಚುಗೆ ವ್ಯಕ್ತಪಡಿಸಿದರು. ಕೇವಲ ವೀಕ್ಷಣೆ ಮಾತ್ರವಲ್ಲದೆ, ನಮ್ಮ ಗೋಶಾಲೆಯಲ್ಲಿಯೇ ತಯಾರಾಗುವ ಎಲ್ಲಾ ಪಾರಂಪರಿಕ ಹಾಗೂ ಸಾವಯವ ಉತ್ಪನ್ನಗಳನ್ನು ಸ್ವತಃ ಅವರೇ ಖರೀದಿಸುವ ಮೂಲಕ ನಮ್ಮ ಕಾರ್ಯವನ್ನು ಬೆಂಬಲಿಸಿದರು.
ಅವರಂತಹ ಅದ್ಭುತ ಸಾಧಕರು ನಮ್ಮ ಗೋಶಾಲೆಯ ಕಾರ್ಯವೈಖರಿ ಬಗ್ಗೆ ವ್ಯಕ್ತಪಡಿಸಿದ ಉತ್ತಮ ಅಭಿಪ್ರಾಯ ನಮಗೆ ಮತ್ತಷ್ಟು ಸ್ಫೂರ್ತಿ ಹಾಗೂ ಶಕ್ತಿ ತುಂಬಿದೆ. ನಿಮ್ಮ ಈ ಭೇಟಿ ಮತ್ತು ಪ್ರೋತ್ಸಾಹಕ್ಕೆ ನಮ್ಮ ಹೃದಯಪೂರ್ವಕ ಧನ್ಯವಾದಗಳು ಸರ್! 🙏