24/12/2025
*ಆತ್ಮೀಯ ಅಗ್ನಿವಂಶ ಕ್ಷತ್ರಿಯ ಸಮುದಾಯದ ಹಿರಿಯರು ಮತ್ತು ಕುಲಭಾಂದವ ಮಿತ್ರರು ಹಾಗೂ ಹಿತೈಷಿಗಳಲ್ಲಿ ಮನವಿ* 🙏🙏🙏
ಇದೇ ತಿಂಗಳು ದಿನಾಂಕ 28.12.2025 ರಂದು ಭಾನುವಾರ ಬೆಳಗ್ಗೆ 11:30 ಕ್ಕೆ ಅಲ್ಬರೂ, ಅನಪನಹಳ್ಳಿ , ಶನೈಶ್ಚರ ಮಠ ( ತಿಪಟೂರು) ಇಲ್ಲಿ ಕರ್ನಾಟಕ ಅಗ್ನಿ ವಂಶ ಕ್ಷತ್ರಿಯ(ತಿಗಳ) ಗಜ ಕೇಸರಿ ಸೇನೆ(ರಿ.) ವತಿಯಿಂದ *ವಾರ್ಷಿಕ ಕ್ಯಾಲೆಂಡರ್* ಅನ್ನು *ಶ್ರೀ ಸೋಮಶೇಖರ ಸ್ವಾಮೀಜಿಯವರ* ಅಮೃತಹಸ್ತದಿಂದ ಬಿಡುಗಡೆ ಮಾಡಲಿದ್ದು, ಸಮಾಜದ ಹಲವಾರು ಹಿರಿಯರು, ಕುಲ ಗೌಡರು, ಯಜಮಾನರು, ಮುಖಂಡರು, ಗಜಕೇಸರಿ ಸೇನೆ ಹಲವು ಘಟಕಗಳ ಪದಾಧಿಕಾರಿಗಳು ಭಾಗಿಯಾಗಲಿದ್ದಾರೆ. ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮಕ್ಕೆ ಸಮಾಜದ ಬಂಧುಗಳು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಕೊರುತ್ತಿದ್ದೇವೆ.
*ಕ್ಯಾಲೆಂಡರ್ ನ ವಿಶೇಷತೆ* :- ಪ್ರತಿ ತಿಂಗಳ 12 ಪುಟದಲ್ಲಿ ಅಗ್ನಿವಂಶ ಕ್ಷತ್ರಿಯ ಸಮುದಾಯಕ್ಕೆ ಸಂಭಂದ ಪಟ್ಟಿರುವ 12 ರಾಜ ಮನೆತನದ ಐತಿಹಾಸಿಕ ಹಿನ್ನೆಲೆ ವಿಷಯ ತಿಳಿಸುವುದು, ರಾಜ್ಯದಲ್ಲಿ ನೆಲೆಸಿರುವ ಸಮುದಾಯದ ಜನರಿಗೆ *ರಾಜ್ಯ ಮತ್ತು ಜಿಲ್ಲಾ, ತಾಲ್ಲೂಕು ಸಮುದಾಯದ ಮುಖಂಡರ ಭಾವಚಿತ್ರ ಹಾಗೂ ಹಿರಿಯ ಯಜಮಾನರ ಭಾವಚಿತ್ರ* ಪರಿಚಯಿಸುವುದು.
ಉದ್ದೇಶ:- ರಾಜ್ಯದಲ್ಲಿ ನೆಲೆಸಿರುವ ಸಮುದಾಯವು ನಾವೆಲ್ಲರೂ ಒಂದೇ ಎನ್ನುವ ಸಂದೇಶ ಸಾರುವುದು.
ಧನ್ಯವಾದಗಳು
🙏🙏🙏🙏🙏
*ಕರ್ನಾಟಕ ಅಗ್ನಿವಂಶ ಕ್ಷತ್ರಿಯ(ತಿಗಳ) ಗಜಕೇಸರಿ ಸೇನೆ(ರಿ.)*