Sahyadri Savors

Sahyadri Savors ಮಲೆನಾಡು ಉತ್ಪನ್ನಗಳು.🌿
Sahyadri Savors is a nature-inspired brand rooted in the rich traditions of the Western Ghats.

We bring you authentic, pure, and natural products crafted with care from locally sourced ingredients.

ಸಹ್ಯಾದ್ರಿ ಸೇವರ್ಸ್ ಕಡೆಯಿಂದ ಎಲ್ಲರಿಗೂ ಗುರು ಪೂರ್ಣಿಮೆಯ ಶುಭಾಶಯಗಳು.🌿
29/07/2026

ಸಹ್ಯಾದ್ರಿ ಸೇವರ್ಸ್ ಕಡೆಯಿಂದ ಎಲ್ಲರಿಗೂ ಗುರು ಪೂರ್ಣಿಮೆಯ ಶುಭಾಶಯಗಳು.🌿

25/07/2026

🥭 ಮಿಡಿ ಮಾವಿನಕಾಯಿ... ಬಾಲ್ಯದ ರುಚಿ ಮತ್ತೆ ನಿಮ್ಮ ಊಟದ ತಟ್ಟೆಗೆ! 😋
ಸಾಂಪ್ರದಾಯಿಕ ವಿಧಾನದಲ್ಲಿ ಸಂರಕ್ಷಿಸಿದ ಗುಣಮಟ್ಟದ ಉಪ್ಪಿನ ನೀರಿನ ಮಿಡಿ. ನಿಮ್ಮಿಷ್ಟದ ಮಸಾಲೆಯಲ್ಲಿ ಉಪ್ಪಿನಕಾಯಿ ತಯಾರಿಸಿ, ಪ್ರತಿಯೊಂದು ಊಟಕ್ಕೂ ವಿಶೇಷ ರುಚಿ ಸೇರಿಸಿ.
📦 ಈಗಲೇ ಆರ್ಡರ್ ಮಾಡಿ – Sahyadri Savors Sahyadri Savors

23/07/2026

🌿 ಕಳಲೆ ಎಂದರೇನು?

ಕಳಲೆ ಎಂದರೆ ಎಳೆಯ ಬಿದಿರಿನ ಮೊಳಕೆ (Bamboo Shoots)
ಮಲೆನಾಡಿನ ವಿಶೇಷ ಆಹಾರ.

🍲 ಸಾರು, ಪಲ್ಯ, ಪೊಡಿ... ಹೀಗೆ ಹಲವು ಸಾಂಪ್ರದಾಯಿಕ ಪದಾರ್ಥಗಳಿಗೆ ಹೇಳಿ ಮಾಡಿಸಿದ ಶಾಕಾಹಾರ..

💚 ವರ್ಷಕ್ಕೊಮ್ಮೆ ಮಾತ್ರ (ಮಳೆಗಾಲದ ಪ್ರಾರಂಭದಲ್ಲಿ) ದೊರೆಯುವ ಈ ಅಪರೂಪದ ಸಾಂಪ್ರದಾಯಿಕ ರುಚಿಯನ್ನು ಈಗಲೇ ನಿಮ್ಮ ಮನೆಗೆ ತಲುಪಿಸಿಕೊಳ್ಳಿ.

⚡ Limited Stock Available!

🛒 Order ಮಾಡಲು Bioದಲ್ಲಿರುವ ಲಿಂಕ್‌ ಅನ್ನು ಕ್ಲಿಕ್ ಮಾಡಿ/ DM ಮಾಡಿ.

📲 ಇಂತಹ ಮಲೆನಾಡಿನ ವಿಶೇಷ ಆಹಾರ ಪದಾರ್ಥಗಳು, ರೆಸಿಪಿಗಳು ಮತ್ತು ದೈನಂದಿನ ಅಪ್‌ಡೇಟ್‌ಗಳಿಗಾಗಿ Follow ಮಾಡಿ ಮತ್ತು ನಮ್ಮ WhatsApp Channel ಅನ್ನು Join ಆಗಿ.





❤️

19/07/2026

🥭 ಕೊಸಗಾಯಿಯಿಂದ 2 ನಿಮಿಷದಲ್ಲಿ ರುಚಿಯಾದ ಗುಜ್ಜು!

ಮಲೆನಾಡಿನ ಮನೆಗಳಲ್ಲಿ ತಲೆಮಾರುಗಳಿಂದ ಮಾಡುತ್ತಿರುವ ಈ ಸರಳ ಮತ್ತು ಸಾಂಪ್ರದಾಯಿಕ ರೆಸಿಪಿಯನ್ನು ನೀವು ಕೂಡ ಒಮ್ಮೆ ಪ್ರಯತ್ನಿಸಿ.

ಬೇಕಾಗುವ ಪದಾರ್ಥಗಳು: • 1 ಕೊಸಗಾಯಿ (ಉಪ್ಪುನೀರಿನಲ್ಲಿ ಸಂರಕ್ಷಿಸಿದ ಮಾವಿನಕಾಯಿ) • ಮೊಸರು • ಉದ್ದಿನ ಕಾಳು • ಸಾಸಿವೆ • ಒಣ ಮೆಣಸು • ಹಸಿಮೆಣಸು ಅಥವಾ ಗಾಂಧಾರಿ ಮೆಣಸು • ಬೆಳ್ಳುಳ್ಳಿ • ಉಪ್ಪು (ಅಗತ್ಯವಿದ್ದರೆ ಮಾತ್ರ) • ಬೇವಿನ ಸೊಪ್ಪು ಅಥವಾ ಇಂಗು (ಐಚ್ಛಿಕ) • ಸ್ವಲ್ಪ ಕಾಯಿತುರಿ (ಇನ್ನಷ್ಟು ರುಚಿಗೆ)

ಮಾಡುವ ವಿಧಾನ: ಕೊಸಗಾಯಿಯನ್ನು ಮೊಸರಿಗೆ ಸೇರಿಸಿ. ಉದ್ದಿನ ಕಾಳು, ಸಾಸಿವೆ, ಒಣ ಮೆಣಸು, ಹಸಿಮೆಣಸು/ಗಾಂಧಾರಿ ಮೆಣಸು ಮತ್ತು ಬೆಳ್ಳುಳ್ಳಿಯಿಂದ ಒಗ್ಗರಣೆ ಮಾಡಿ ಸೇರಿಸಿ. (ಬೆಳ್ಳುಳ್ಳಿ ಆಗದವರು ಬೇವಿನ ಸೊಪ್ಪು ಅಥವಾ ಇಂಗು ಸೇರಿಸಿಕೊಳ್ಳಬಹುದು ) ಕೊಸಗಾಯಿ ಈಗಾಗಲೇ ಉಪ್ಪಿನ ನೀರಿನಲ್ಲಿ ಸಂರಕ್ಷಿಸಿರುವುದರಿಂದ ಉಪ್ಪನ್ನು ರುಚಿ ನೋಡಿ ಮಾತ್ರ ಸೇರಿಸಿ. ಖಾರವನ್ನೂ ನಿಮ್ಮ ಅಭಿರುಚಿಗೆ ತಕ್ಕಂತೆ ಹೊಂದಿಸಿ. ಕೊನೆಯಲ್ಲಿ ಸ್ವಲ್ಪ ಕಾಯಿತುರಿ ರುಬ್ಬಿ ಸೇರಿಸಿದರೆ ರುಚಿ ಇನ್ನಷ್ಟು ಹೆಚ್ಚುತ್ತದೆ.

⏱️ ಕೇವಲ 2 ನಿಮಿಷಗಳಲ್ಲಿ ಸವಿ

12/07/2026

🌿 ಹಲಸಿನ ಕಾಯಿ ಹಪ್ಪಳ — ಒಂದು ತಿಂಡಿ ಮಾತ್ರವಲ್ಲ, ಮಲೆನಾಡಿನ ಆಹಾರ ಪರಂಪರೆಯ ಒಂದು ಭಾಗ.
ಹಲಸಿನ ಕಾಯಿಯಿಂದ ಆರಂಭವಾಗಿ... ಸ್ವಚ್ಛಗೊಳಿಸುವುದು, ಬೇಯಿಸುವುದು, ಬೀಸುವುದು, ಒಣಗಿಸುವುದು ಮತ್ತು ಕರಿದು ಸವಿಯುವವರೆಗೆ — ನಮ್ಮ ಹಿರಿಯರ ಜಾಣ್ಮೆ ಮತ್ತು ಸಾಂಪ್ರದಾಯಿಕ ಆಹಾರ ಸಂರಕ್ಷಣೆಯ ಸುಂದರ ಉದಾಹರಣೆ. 🌱
ಗರಿಗರಿಯಾದ ರುಚಿ, ಮಲೆನಾಡಿನ ಸೊಗಡು ಮತ್ತು ಮನೆಯ ಹಳೆಯ ನೆನಪುಗಳನ್ನು ಹೊತ್ತು ತರುವ ಸಹ್ಯಾದ್ರಿ ಸವರ್ಸ್ ಹಲಸಿನ ಕಾಯಿ ಹಪ್ಪಳ. 🍃
🛒 ಶುದ್ಧ ಮಲೆನಾಡಿನ ಉತ್ಪನ್ನಗಳಿಗಾಗಿ: sahyadrisavors.in

10/07/2026

"ಇಂದು ನಾವು ಬಳಸುವ ಕಾಳು ಮೆಣಸು... ಒಮ್ಮೆ ವಿಶ್ವದ ಅತ್ಯಂತ ಬೆಲೆಬಾಳುವ ಮಸಾಲೆಗಳಲ್ಲಿ ಒಂದಾಗಿತ್ತು."

"ಕಾಳು ಮೆಣಸಿನ ಮೂಲ ಭಾರತ, ವಿಶೇಷವಾಗಿ ಪಶ್ಚಿಮ ಘಟ್ಟಗಳ ಮಲೆನಾಡು ಪ್ರದೇಶ. ಉಷ್ಣ ಮತ್ತು ತೇವಯುಕ್ತ ಹವಾಮಾನದಲ್ಲಿ ಬಳ್ಳಿಯಾಗಿ ಬೆಳೆಯುವ ಈ ಸಸ್ಯದ ಹಸಿರು ಹಣ್ಣುಗಳನ್ನು ಕೊಯ್ದು ಒಣಗಿಸಿದಾಗ ಕಪ್ಪು ಮೆಣಸು ಸಿಗುತ್ತದೆ."

"ಇತಿಹಾಸದಲ್ಲಿ ಕಾಳು ಮೆಣಸು 'ಕಪ್ಪು ಚಿನ್ನ' ಎಂದೇ ಪ್ರಸಿದ್ಧವಾಗಿತ್ತು. ಪ್ರಾಚೀನ ಕಾಲದಿಂದಲೇ ಅರಬ್, ರೋಮನ್ ಮತ್ತು ಯುರೋಪಿಯನ್ ವ್ಯಾಪಾರಿಗಳು ಇದರಿಗಾಗಿ ಭಾರತಕ್ಕೆ ಬಂದಿದ್ದರು. ಸಮುದ್ರ ಮಾರ್ಗದ ವ್ಯಾಪಾರಕ್ಕೂ ಇದು ದೊಡ್ಡ ಪ್ರೇರಣೆಯಾಗಿತ್ತು."

"ಕಾಳು ಮೆಣಸಿನ ಹಲವು ಪ್ರಭೇದಗಳಿವೆ. ಮಲಬಾರ್, ತೆಲಿಚೇರಿ, ಪೆನ್ನಿ ಮತ್ತು ಲಾಂಪಾಂಗ್ ಮುಂತಾದ ವಿಧಗಳು ಗಾತ್ರ, ಘಮ ಮತ್ತು ಖಾರದ ಮಟ್ಟದಲ್ಲಿ ಸ್ವಲ್ಪ ವ್ಯತ್ಯಾಸ ಹೊಂದಿವೆ."

"ಅಡುಗೆಯಲ್ಲಿ ಸ್ವಲ್ಪ ಪ್ರಮಾಣದಲ್ಲೇ ಬಳಸಿದರೂ, ಇದರ ವಿಶಿಷ್ಟ ಸುವಾಸನೆ ಮತ್ತು ಖಾರವು ಯಾವುದೇ ಪದಾರ್ಥದ ರುಚಿಯನ್ನು ಹೆಚ್ಚಿಸುತ್ತದೆ."

"ಸಾರು, ರಸಂ, ಕಷಾಯದಿಂದ ಹಿಡಿದು ಅನೇಕ ಸಾಂಪ್ರದಾಯಿಕ ಅಡುಗೆಗಳಲ್ಲಿ ಕಾಳು ಮೆಣಸಿಗೆ ಇಂದಿಗೂ ವಿಶೇಷ ಸ್ಥಾನವಿದೆ."

"ಮಲೆನ�

08/07/2026

ಸಣ್ಣ ಕಾಳು... ದೊಡ್ಡ ಪ್ರಯೋಜನ 🌿
ನಮ್ಮ ಅಡುಗೆ ಮನೆಯಲ್ಲಿರುವ ಕಾಳು ಮೆಣಸು ಕೇವಲ ಖಾರಕ್ಕಾಗಿ ಮಾತ್ರವಲ್ಲ. ಅದರಲ್ಲಿರುವ ನೈಸರ್ಗಿಕ ಸಂಯುಕ್ತಗಳು, ಪೈಪರಿನ್ ಮತ್ತು ವಿಶೇಷ ಗುಣಗಳಿಂದ ಇದು ನಮ್ಮ ಸಾಂಪ್ರದಾಯಿಕ ಆಹಾರದಲ್ಲಿ ಸಾವಿರಾರು ವರ್ಷಗಳಿಂದ ತನ್ನದೇ ಆದ ಸ್ಥಾನ ಹೊಂದಿದೆ. 🌱
ಮಲೆನಾಡಿನ ನೈಸರ್ಗಿಕ ಆಹಾರ ಪದಾರ್ಥಗಳ ಹಿಂದಿರುವ ಇಂತಹ ಆಸಕ್ತಿದಾಯಕ ತಥ್ಯಗಳಿಗಾಗಿ Sahyadri Savors ಅನ್ನು Follow ಮಾಡಿ.
🍃 ಶುದ್ಧ ಮಲೆನಾಡಿನ ಉತ್ಪನ್ನಗಳಿಗಾಗಿ: sahyadrisavors.in

06/07/2026

🌿 ಒಂದೆಲಗ (ಬ್ರಾಹ್ಮಿ) – ಪ್ರಕೃತಿಯ ಅಮೂಲ್ಯ ಕೊಡುಗೆ!

ಇತ್ತೀಚೆಗೆ ಸಣ್ಣಪುಟ್ಟ ವಿಷಯಗಳನ್ನೇ ಮರೆತು ಬಿಡುತ್ತಿದ್ದೀರಾ? 🤔

ಆಯುರ್ವೇದದಲ್ಲಿ ಶತಮಾನಗಳಿಂದ ಬಳಸುತ್ತಿರುವ ಒಂದೆಲಗ ಏಕಾಗ್ರತೆ, ನೆನಪಿನ ಶಕ್ತಿ ಹಾಗೂ ಮಾನಸಿಕ ಕ್ಷೇಮವನ್ನು ಬೆಂಬಲಿಸುವ ಔಷಧೀಯ ಸಸ್ಯವಾಗಿ ಪ್ರಸಿದ್ಧವಾಗಿದೆ. 🌱

ನಮ್ಮ Sahyadri Savors ಬ್ರಾಹ್ಮಿ ಪುಡಿ – ಗುಣಮಟ್ಟದ ಎಲೆಗಳಿಂದ, ಶುದ್ಧವಾಗಿ ತಯಾರಿಸಿದ ಉತ್ಪನ್ನ.

🛒 Order now: sahyadrisavors.in
📲 WhatsApp Channel ಸೇರಿ ಹೊಸ ಉತ್ಪನ್ನಗಳ ಅಪ್‌ಡೇಟ್‌ಗಳನ್ನು ಪಡೆಯಿರಿ.
💚 Follow for authentic natural products & wellness tips.

28/06/2026

🌿 ಮರೆವು ಹೆಚ್ಚಾಗಿದೆಯಾ? ಏಕಾಗ್ರತೆ ಕಡಿಮೆಯಾಗಿದೆಯಾ?

ಪ್ರಕೃತಿಯ ಅಮೂಲ್ಯ ಕೊಡುಗೆ ಬ್ರಾಹ್ಮೀ 🌱

ನಮ್ಮ ಬ್ರಾಹ್ಮೀ ಪುಡಿ ಉತ್ತಮ ಗುಣಮಟ್ಟದ ಎಲೆಗಳಿಂದ ತಯಾರಿಸಲಾಗಿದೆ.

💚 ನೈಸರ್ಗಿಕ | ಶುದ್ಧ | ಯಾವುದೇ ಕೃತಕ ಬಣ್ಣ ಅಥವಾ ರುಚಿ ಇಲ್ಲ

👉 ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡಿ.
📲 ನಮ್ಮ WhatsApp Channel ಸೇರಿ ಹೊಸ ಉತ್ಪನ್ನಗಳ ಅಪ್‌ಡೇಟ್ ಪಡೆಯಿರಿ.

🌐 sahyadrisavors.in
Follow Savors for more authentic natural products and useful information.

25/06/2026

From the top of a tree to your table — nature's sweetness, just as the bees made it. 🐝🍯

ಮರದ ತುದಿಯಿಂದ ನಿಮ್ಮ ಊಟದ ಮೇಜಿನವರೆಗೆ — ಜೇನುಹುಳುಗಳು ಸೃಷ್ಟಿಸಿದ ನೈಸರ್ಗಿಕ ಸಿಹಿ. 🐝🍯

Address

Sirsi
Bangalore
581402

Alerts

Be the first to know and let us send you an email when Sahyadri Savors posts news and promotions. Your email address will not be used for any other purpose, and you can unsubscribe at any time.

Shortcuts

Share