Ganiger farm house

Ganiger farm house Idu namma uralliro agricultural farm illi goats male goats country chicken chicks dairy products ide

08/10/2018

ಪಶುಸಾಕಣೆಹೈನುಗಾರಿಕೆಗೆ ಹಸು ಕೊಳ್ಳುವಾಗ ಗಮನಿಸಬೇಕಾದ ಅಂಶಗಳು Published 2 months ago on 30th July 2018 By ಕೃಷಿರಂಗ

ಹಂಚಿಕೊಳ್ಳಿ
3.3K
Shares

ಹೈನುಗಾರಿಕೆಯಲ್ಲಿ ಯಶಸ್ವಿಯಾಗಬೇಕಾದರೆ ಮೊಟ್ಟ ಮೊದಲು ನಿಮಗೆ ಬೇಕಾಗಿರುವುದು ಒಳ್ಳೆ ತಳಿಯ ಉತ್ತಮ ಹಸುಗಳು, ಈ ವಿಷಯದಲ್ಲಿ ಸ್ವಲ್ಪ ಯಾಮಾರಿದರೂ ಹೈನುಗಾರಿಕೆ ಹೋಗಿ ಹಸು ಸಾಕಾಣಿಕೆ ಆಗುತ್ತದಷ್ಟೇ.

ಮಾಮೂಲಾಗಿ ಈ ವಿಷಯದಲ್ಲಿ ಸ್ವಲ್ಪ ನುರಿತವರಿಗೆ ಅನುಭವ ಇರುತ್ತದೆ, ಆದರೆ ಹೊಸದಾಗಿ ಹೈನುಗಾರಿಕೆ ಆರಂಭಿಸುವವರು ಎಚ್ಚರಿಕೆವಹಿಸಿ ಹೆಜ್ಜೆಯಿಡಬೇಕು.
ಹೆಚ್.ಎಫ್ ಅಥವಾ ಜರ್ಸಿ ತಳಿಯ ಒಂದು ಹಸುವಿಗೆ ಕಮ್ಮಿಯೆಂದರೂ 40 ಸಾವಿರದಿಂದ 60 ರವರೆಗೆ ಖರ್ಚು ಮಾಡಬೇಕಾಗುತ್ತದೆ, ಆದ್ದರಿಂದ ಎಲ್ಲ ಪರೀಕ್ಷಿಸಿಯೇ ಕೊಳ್ಳಬೇಕು.
ಒಂದೇ ಸಲಕ್ಕೆ ನೋಡಿದರೆ ನಿಮಗೆ ಎಲ್ಲ ಹಸುಗಳೂ ಒಂದೇ ಥರ ಕಾಣುತ್ತವೆ, ಚೆನ್ನಾಗಿಯೇ ಇದ್ದಾವಲ್ಲ ಅನಿಸುತ್ತದೆ, ಆದರೆ ನೂನ್ಯತೆಗಳು, ಖಾಯಿಲೆಗಳು, ಹಸು ಕೊಡುವ ಹಾಲಿನ ಪ್ರಮಾಣ ಇವೆಲ್ಲ ಮೇಲ್ನೋಟಕ್ಕೆ ಗೊತ್ತಾಗಲ್ಲ.
ಹಸು ಅಂದ್ರೆ ಹೀಗಿರಬೇಕು ನೋಡಿ…
1) ಸಾಧ್ಯವಾದಷ್ಟು ಒಂದು ಅಥವಾ ಎರಡು ಮರಿ ಹಾಕಿದ ಹಸುಗಳನ್ನು ಆರಿಸಿಕೊಳ್ಳಿ
2) ಇನ್ನೂ ಒಂದು ಸಲವೂ ಗರ್ಭ ಧರಿಸದ ಹಸು ಕೊಳ್ಳುವ ರಿಸ್ಕ್ ಬೇಡ
3) ಹೆಚ್ಚು ಹಾಲು ಕೊಡುವ ಹಸುಗಳು ಸೌಮ್ಯ ಸ್ವಭಾವ ಹೊಂದಿರುತ್ತವೆ, ಹಾಯುವುದು – ಒದೆಯುವುದು ಮಾಡಿದರೆ ಅದು ಹೆಚ್ಚು ಹಾಲು ಕೊಡಲ್ಲ ಅಂತ ಅರ್ಥ.
4) ಚರ್ಮ ನುಣುಪಾಗಿರಬೇಕು, ಕೂದಲು ಮೃದುವಾಗಿರಬೇಕು.
5) ಎದೆಗುಂಡಿಗೆ ಮತ್ತು ಹೊಟ್ಟೆ ದೊಡ್ಡದಾಗಿರಬೇಕು
6) ಕಣ್ಣುಗಳು ಚುರುಕಾಗಿಯು, ಕಾಂತಿಯುತವಾಗಿಯೂ ಇರಬೇಕು.
7) ಕೆಚ್ಚಲಿನ ಮೇಲೆ ಹಾಗೂ ಅದರಿಂದ ಮುಂದೆ ಹೋಗಿರುವ ರಕ್ತನಾಳಗಳು ದೊಡ್ಡದಾಗಿ ಕಣ್ಣಿಗೆ ಎದ್ದು ಕಾಣುವ ಹಾಗಿರಬೇಕು ( ಚಿತ್ರ 2)



8) ಕೆಚ್ವಲು ದೊಡ್ಡದಾಗಿರಬೇಕು
9) ಮೊಲೆ ತೊಟ್ಟುಗಳು ಹೆಚ್ವು ಕಮ್ಮಿ ಇರದೇ ನಾಲ್ಕೂ ತೊಟ್ಟುಗಳು ಸಮನಾಗಿರಬೇಕು. (ಚಿತ್ರ 3)

10) ಎರಡೂ ಹಿಂಗಾಲುಗಳ ನಡುವಿನ ಅಂತರ ಅಗಲವಾಗಿರಬೇಕು
11) ಗರ್ಭ ಧರಿಸಿದ ಹಸು ಸಿಗದೇ ಕರು ಹಾಕಿದ ಹಸು ತರುವ ಹಾಗಿದ್ದರೆ ಅದು ಕರು ಹಾಕಿ ಎರಡು ತಿಂಗಳು ಮೀರಿರಬಾರದು
12) ನೀವು ಹಸುವಿಗೆ ದೊಡ್ಡ ಮೊತ್ತ ಕೊಡುತ್ತಿರಾದ್ದರಿಂದ ಸ್ವಲ್ಪವೂ ಹಿಂಜರಿಯದೇ ಕೊಳ್ಳುವ ಮೊದಲು ಎರಡರಿಂದ ಮೂರು ಟೈಂ ಹಿಂಡಿಸಿ ಅದು ಕೊಡುವ ಹಾಲಿನ ಪ್ರಮಾಣ ನೋಡಿಯೇ ತಗೆದುಕೊಳ್ಳಿ
13) ಒಂದು ಹೆಚ್.ಎಫ್ ಹಸು ಒಂದು ದಿನಕ್ಕೆ 15-20 ಲೀಟರ್ ಹಾಲು ಕೊಡಬೇಕು, ಜರ್ಸಿ ಹಸು 12-16 ಲೀಟರ್ ಹಾಲು ಕೊಡಬೇಕು.
14) ಹಸು ಸಾಕಣಿಯೇ ಫಾರ್ಮ್ ಗೇ ಹೋಗಿ ಕೊಳ್ಳುವುದಾದರೆ ಆ ಹಸುವಿನ ಸಂಪೂರ್ಣ ಬಯೊಡಟಾ ಅವರ ಬಳಿ ಇರುತ್ತದೆ, ಅದನ್ನು ಕೂಲಂಕಷವಾಗಿ ಪರಿಶೀಲಿಸಿ.
15) ಸಾಧ್ಯವಾದರೆ ಹಸು ಖರಿದಿಸಲು ಹೋಗುವಾಗ ಒಬ್ಬ ಪಶು ವೈದ್ಯರು ಜೊತೆಗಿದ್ದರೆ ಒಳ್ಳೆಯದು.
ಇಷ್ಟು ಜಾಗ್ರತೆವಹಿಸಿ ಹಸುಗಳನ್ನು ತಂದು ಶ್ರದ್ಧೆಯಿಂದ ಸಲುಹಿದರೆ ಹೈನುಗಾರಿಕೆ ನಿಮ್ಮ ಕೈ ಹಿಡಿಯುತ್ತದೆ, ಕೈ ತುಂಬಾ ಕಾಸು ಖಚಿತ.

08/10/2018

ಪಶುಸಾಕಣೆಹಾಲಿಗಿಂತಲೂ ಗೋಮೂತ್ರಕ್ಕೆ ಹೆಚ್ಚಾಯ್ತು ಬೇಡಿಕೆ: 1 ಲೀಟರ್ ಗೆ 30 ರೂ. Published 3 months ago on 24th July 2018 By ಕೃಷಿರಂಗ

ಹಂಚಿಕೊಳ್ಳಿ
49
Shares

ರಾಜಸ್ಥಾನದಲ್ಲಿ ಈಗ ಗೋಮೂತ್ರದ ಬೆಲೆ ಹೆಚ್ಚಾಗಿದ್ದು, ರೈತರಿಗೆ ಆದಾಯದ ಮೂಲವಾಗಿ ಪರಿವರ್ತನೆಯಾಗಿದೆ.

ರಾಜಸ್ಥಾನದ ರೈತರು ಗಿರ್ ಮತ್ತು ತಾಪಾರ್ಕರ್ ಎಂಬ ಪ್ರಮುಖವಾದ ತಳಿಯ ಗೋಮೂತ್ರವನ್ನು ಮಾರುಕಟ್ಟೆಗಳಲ್ಲಿ ಪ್ರತಿ ಲೀಟರ್ ಗೆ 15 ರೂ. ನಿಂದ 30 ರೂ. ನಂತೆ ಮಾರಾಟ ಮಾಡುತ್ತಿದ್ದರೆ, ಹಾಲನ್ನು 22 ರೂ. ನಿಂದ 25 ರೂ ವರೆಗೆ ಮಾರಾಟ ಮಾಡುತ್ತಿದ್ದಾರೆ.

2 ವರ್ಷಗಳಿಂದ ಹೈನುಗಾರಿಕೆಯಲ್ಲಿ ತೊಡಗಿರುವ ಜೈಪುರದ ಕೈಲೇಶ್ ಗುಜ್ಜರ್ ಪ್ರತಿಕ್ರಿಯಿಸಿ, ಗೋಮೂತ್ರ ಮಾರಾಟದಿಂದಾಗಿ ನನ್ನ ಆದಾಯ 30% ಹೆಚ್ಚಾಗಿದೆ. ಮಾರಾಟದಿಂದಾಗಿ ಈಗ ನನಗೆ ಅದೃಷ್ಟ ಬಂದಿದ್ದು, ಗೋಮೂತ್ರ ಸಂಗ್ರಹಿಸಲು ರಾತ್ರಿಯಿಡಿ ಹಸುವಿನ ಕೊಟ್ಟಿಗೆಯಲ್ಲೇ ಎಚ್ಚರವಾಗಿರಬೇಕಾಗುತ್ತದೆ. ದನ ನಮ್ಮ ತಾಯಿ, ಹಾಗಾಗಿ ರಾತ್ರಿಯಿಡಿ ಗೋಮೂತ್ರಕ್ಕಾಗಿ ಕೊಟ್ಟಿಗೆಯಲ್ಲಿ ಕಾಯುವುದು ನನಗೆ ಬೇಸರವಾಗುವುದಿಲ್ಲ ಎಂದು ಹೇಳಿದ್ದಾರೆ.

ಬೇಡಿಕೆ ಯಾಕೆ?

ಗೋಮೂತ್ರವನ್ನು ಹೆಚ್ಚಾಗಿ ರೈತರು ತಮ್ಮ ಕೃಷಿಯನ್ನು ಹಾಳು ಮಾಡುವ ಕೀಟಗಳನ್ನು ತಡೆಗಟ್ಟಲು ಬೆಳೆಗಳ ಮೇಲೆ ಸಿಂಪಡಿಸುತ್ತಾರೆ. ಅಷ್ಟೇ ಅಲ್ಲದೇ ಯಜ್ಞ, ಪಂಚಗವ್ಯಗಳಲ್ಲಿ ಮತ್ತು ಧಾರ್ಮಿಕ ಆಚರಣೆ ಕಾರ್ಯಕ್ರಮಗಳಲ್ಲಿ ಬಳಸುವುದರಿಂದ ಬೇಡಿಕೆ ಹೆಚ್ಚಾಗಿದೆ.

ಉದಯಪುರದ ಸರ್ಕಾರಿ ಮಹಾರಾಣಾ ಪ್ರತಾಪ್ ಕೃಷಿ ವಿಶ್ವವಿದ್ಯಾಲಯ, ಜೈವಿಕ ಕೃಷಿ ಯೋಜನೆಗಾಗಿ ಪ್ರತಿ ತಿಂಗಳಿಗೂ 300 ರಿಂದ 500 ಲೀಟರ್ ನಷ್ಟು ಗೋಮೂತ್ರವನ್ನು ಬಳಸುತ್ತದೆ. ಪ್ರತಿ ತಿಂಗಳು 15,000-20,000 ರೂಪಾಯಿಯ ಮೌಲ್ಯದಷ್ಟು ಗೋಮೂತ್ರವನ್ನು ಖರೀದಿಸುತ್ತದೆ ಎಂದು ಉಪಕುಲಪತಿ ಉಮಾ ಶಂಕರ್ ಹೇಳಿದ್ದಾರೆ.

11/08/2018

Hi friends growing my nepiear grass

Address

Belgaum
591118

Telephone

8861580703

Website

Alerts

Be the first to know and let us send you an email when Ganiger farm house posts news and promotions. Your email address will not be used for any other purpose, and you can unsubscribe at any time.

Share