ಅಡುಗೆ ಮನೆ

ಅಡುಗೆ ಮನೆ Contact information, map and directions, contact form, opening hours, services, ratings, photos, videos and announcements from ಅಡುಗೆ ಮನೆ, Kitchen/Cooking, Sulya.

ನಮಸ್ತೇ ಸ್ನೇಹಿತರೆ.......,

ಅಡುಗೆ ಮನೆ ಪೇಜ್ ಅಲ್ಲಿ ಕೆಲವೊಂದು ಅಡುಗೆ ರೆಸಿಪಿಯನ್ನು ಅಪ್ ಲೋಡ್ ಮಾಡುವೆ ನೀವು ನೋಡಿ ಎಲ್ಲರೂ ಇಷ್ಟ ಪಟ್ಟರೆ ಒಂದು ಲೈಕ್ ಕೊಟ್ಟು ಫಾಲೋ ಮಾಡೋದನ್ನು ಮರಿಬೇಡಿ. ���ಹಾಗೆ ಕಮಿಂಟ್ ಮಾಡಿ........

ಬಾಳೆ ಹೂವಿನ (ಕುಂಡಿಗೆ ) ದೋಸೆ  #ಮೊದಲು ೩ಕಪ್ ದೋಸೆ ಅಕ್ಕಿಯನ್ನು ಸ್ವಲ್ಪ ಹೊತ್ತು ನೆನೆಹಾಕಿಡಿ. ಈಗ ೨ ಬಾಳೆ ಹೂವವನ್ನು ಸ್ವಲ್ಪ ಬಿಡಿಸಿ ಸಣ್ಣಗ...
08/02/2026

ಬಾಳೆ ಹೂವಿನ (ಕುಂಡಿಗೆ ) ದೋಸೆ #
ಮೊದಲು ೩ಕಪ್ ದೋಸೆ ಅಕ್ಕಿಯನ್ನು ಸ್ವಲ್ಪ ಹೊತ್ತು ನೆನೆಹಾಕಿಡಿ. ಈಗ ೨ ಬಾಳೆ ಹೂವವನ್ನು ಸ್ವಲ್ಪ ಬಿಡಿಸಿ ಸಣ್ಣಗೆ ಹೆಚ್ಚಿ ಮಜ್ಜಿಗೆ ನೀರಿಗೆ ಹಾಕಿ. ಈಗ ಚೆನ್ನಾಗಿ ಅಕ್ಕಿಯನ್ನು ತೊಳೆದು ಹೆಚ್ಚಿದ ಬಾಳೆಹೊವನ್ನು ಮಜ್ಜಿಗೆ ನೀರಿನಿಂದ ತೆಗೆದು ಅಕ್ಕಿ ಜೊತೆ ೧ ಮಿಕ್ಸ್ ಜಾರಿಗೆ ಹಾಕಿ ನುಣ್ಣಗೆ ರುಬ್ಬಿ.ರುಬ್ಬುವಾಗ ೩ ಒಣಮೆಣಸು, ೧ಟೀ ಸ್ಪೂನ್ ಕೊತ್ತಂಬರಿ, ೧ಟೀ ಸ್ಪೂನ್ ಜೀರಿಗೆ, ಸ್ವಲ್ಪ ಹುಳಿ ಹಾಕಿ ರುಬ್ಬಿ. ಹಾಗೆ ಸಣ್ಣ ತುಂಡು ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಚೆನ್ನಾಗಿ ಮಿಕ್ಸ್ ಮಾಡಿ. ಈಗ ಒಲೆಯ ಮೇಲೆ ಕಾವಲಿಗೆ ಇಟ್ಟು ಬಿಸಿಯಾಗುವಾಗ ಸ್ವಲ್ಪ ಎಣ್ಣೆ ಹಚ್ಚಿ, ಸ್ವಲ್ಪ ಹಿಟ್ಟನ್ನು ಹಾಕಿ ತೆಳುವಾಗಿ ಹರಡಿ ಮುಚ್ಚಳ ಮುಚ್ಚಿ. ಈಗ ಮುಚ್ಚಳ ತೆಗೆದು ದೋಸೆಯನ್ನು ತೆಗೆದು ೧ಪ್ಲೇಟ್ ಗೆ ಹಾಕಿ ಉಳಿದ ಹಿಟ್ಟನ್ನು ಅದೇ ರೀತಿ ಮಾಡಿ. ಬೆಲ್ಲದ ರವೆ, ನಿಮಗೆ ಇಷ್ಟದ ಗೊಜ್ಜಿನೊಂದಿಗೆ ಸವಿಯಿರಿ. ಒಮ್ಮೆ ಮಾಡಿನೋಡಿ ಖಂಡಿತ ಇಷ್ಟ ಆಗುತ್ತೆ.

ಧನ್ಯವಾದಗಳು 🙏

ಸಿಹಿ ದಾರೆಹುಳಿ ಸಾರು  #ಮೊದಲು ಸಿಹಿ ದಾರೆಹುಳಿ ಅಂದರೆ ಸ್ಟಾರ್ ಫ್ರೂಟ್ ನ್ನು ಚೆನ್ನಾಗಿ ತೊಳೆದು ತೆಳುವಾಗಿ ಹಚ್ಚಿ.  ನಂತರ ೧ಬೌಲ್ ಗೆ ಸ್ವಲ್ಪ ...
19/10/2025

ಸಿಹಿ ದಾರೆಹುಳಿ ಸಾರು #
ಮೊದಲು ಸಿಹಿ ದಾರೆಹುಳಿ ಅಂದರೆ ಸ್ಟಾರ್ ಫ್ರೂಟ್ ನ್ನು ಚೆನ್ನಾಗಿ ತೊಳೆದು ತೆಳುವಾಗಿ ಹಚ್ಚಿ. ನಂತರ ೧ಬೌಲ್ ಗೆ ಸ್ವಲ್ಪ ನೀರು ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಬೆಲ್ಲ ಹಾಕಿ ಸ್ವಲ್ಪ ಅರಿಶಿನ ಹುಡಿ ಹಾಕಿ ಒಲೆಯ ಮೇಲೆ ಇಟ್ಟು ಬಿಸಿಯಾಗುವಾಗ ಹಚ್ಚಿಟ್ಟ ಸಿಹಿ ದಾರೆ ಹುಳಿ, ೪ ಹಸಿಮೆಣಸುನ್ನು ಹಚ್ಚಿ ಹಾಕಿ ಚೆನ್ನಾಗಿ ಕುದಿಸಿ ಬೆಂದ ಕೂಡಲೇ ಸ್ವಲ್ಪ ನೀರು ರುಚಿ ನೋಡಿಕೊಂಡು ಉಪ್ಪು, ಬೆಲ್ಲ ಹಾಕಿ ಚೆನ್ನಾಗಿ ಕುದಿಸಿ ಸಾಸಿವೆ ಮೆಣಸಿನ ಒಗ್ಗರಣೆ ಹಾಕಿ ಈಗ ರುಚಿಯಾದ ಸಿಹಿ ದಾರೆಹುಳಿ ಸಾರು ರೆಡಿ.

ಧನ್ಯವಾದಗಳು 🙏

ಪಪ್ಪಾಯ ಗ್ರೇವಿ "ಮೊದಲು ಗಟ್ಟಿ ಮೊಸರು ೧ ಕಪ್ ತೆಗದು ಕೊಂಡು ೧ ಬೌಲ್ ಗೆ ಹಾಕಿ ಚೆನ್ನಾಗಿ ಕದಡಿ ಪೇಸ್ಟ್ ಮಾಡಿ ಇಟ್ಟುಕೊಂಡು, ೧ ಬೌಲ್ ಗೆ ಸ್ವಲ್ಪ...
05/10/2025

ಪಪ್ಪಾಯ ಗ್ರೇವಿ "
ಮೊದಲು ಗಟ್ಟಿ ಮೊಸರು ೧ ಕಪ್ ತೆಗದು ಕೊಂಡು ೧ ಬೌಲ್ ಗೆ ಹಾಕಿ ಚೆನ್ನಾಗಿ ಕದಡಿ ಪೇಸ್ಟ್ ಮಾಡಿ ಇಟ್ಟುಕೊಂಡು, ೧ ಬೌಲ್ ಗೆ ಸ್ವಲ್ಪ ನೀರು ಹಾಕಿ ಒಲೆಯ ಮೇಲೆ ಇಟ್ಟು ಕುದಿ ಬರುವಾಗ ಮೊಸರು ಹಾಕಿ ಅದಕ್ಕೆ ೪ ಹಸಿಮೆಣಸು, ಹಚ್ಚಿದ ೧ ಈರುಳ್ಳಿ, ೨ಟೀ ಸ್ಪೂನ್ ಪುಟಾಣಿ ಕಡ್ಲೆ ಹಾಕಿ ಚೆನ್ನಾಗಿ ಬೇಯಿಸಿ. ಈಗ ಮೊಸರು ನೀರು ಬಿಡುವುದು ಆ ನೀರು ಮುಕ್ಕಾಲು ಬಾಗ ಕುದಿದು ಆವಿಯಾದರೆ ಸಾಕು ನಂತರ ಸ್ವಲ್ಪ ತಣ್ಣಗಾದ ಮೇಲೆ ಮಿಕ್ಸ್ ಜಾರಿಗೆ ಹಾಕಿ ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ನುಣ್ಣಗೆ ರುಬ್ಬಿ. ಈಗ ೧ ಬಾಣಲೆಗೆ ಸ್ವಲ್ಪ ಎಣ್ಣೆ, ಸ್ವಲ್ಪ ಸಾಸಿವೆ ಸ್ವಲ್ಪ ಇಂಗು ಹಾಕಿ ಸಾಸಿವೆ ಸಿಡಿಯುವಾಗ ಕರಿಬೇವು ಹಾಕಿ ನಂತರ ೨ ಈರುಳ್ಳಿ ಹಚ್ಚಿ ಹಾಕಿ ನಂತರ ಸಣ್ಣಗೆ ಹಚ್ಚಿದ ೩ಟೊಮೇಟೊ, ೨ ಆಲೂಗಡ್ಡೆ,೧ಪಪ್ಪಾಯ ಹಾಕಿ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಬೆಲ್ಲ ಖಾರಕ್ಕೆ ಸ್ವಲ್ಪ ಮೆಣಸಿನ ಹುಡಿ ಹಾಕಿ ಸ್ವಲ್ಪ ಕೊತ್ತಂಬರಿ ಹುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಸ್ವಲ್ಪ ನೀರು ಹಾಕಿ ಬೇಯಿಸಿ. ಬೆಂದ ಕೂಡಲೇ ರುಬ್ಬಿದ ಮಸಾಲೆ ಹಾಕಿ ಸ್ವಲ್ಪ ನೀರು ಹಾಕಿ ಚೆನ್ನಾಗಿ ಕುದಿಸಿ. ನಿಮಗೆ ಇಷ್ಟದ ತರಕಾರಿ ಹಾಕಿ ಮಾಡಬಹುದು. ಈಗ ಪಪ್ಪಾಯ ಗ್ರೇವಿ ರೆಡಿ. ದೋಸೆ ಚಪಾತಿ, ಅನ್ನ ಜೊತೆಗೆ ತಿನ್ನಲು ತುಂಬಾ ರುಚಿ.

ಅವಲಕ್ಕಿ ಚೂಡಾ ಮೊದಲು ೧/೪ ಕೆಜಿ ಆಗುವಷ್ಟು ಅವಲಕ್ಕಿ ಯನ್ನು ಸ್ವಲ್ಪ ಸ್ವಲ್ಪ ವೇ ಗರಿ ಗರಿಯಾಗಿ ಹುರಿದುಕೊಳ್ಳಿ. ನಂತರ ೧೦ಟೀ ಸ್ಪೂನ್ ಸಕ್ಕರೆ, ೨...
17/09/2025

ಅವಲಕ್ಕಿ ಚೂಡಾ

ಮೊದಲು ೧/೪ ಕೆಜಿ ಆಗುವಷ್ಟು ಅವಲಕ್ಕಿ ಯನ್ನು ಸ್ವಲ್ಪ ಸ್ವಲ್ಪ ವೇ ಗರಿ ಗರಿಯಾಗಿ ಹುರಿದುಕೊಳ್ಳಿ. ನಂತರ ೧೦ಟೀ ಸ್ಪೂನ್ ಸಕ್ಕರೆ, ೨ಟೀ ಸ್ಪೂನ್ ಮೆಣಸಿನ ಹುಡಿ, ೧೨/೧ಟೀ ಸ್ಪೂನ್ ಉಪ್ಪು, ಸ್ವಲ್ಪ ಅರಶಿನ ಹುಡಿ ಇವಿಷ್ಟ ನ್ನು ಮಿಕ್ಸ್ ಜಾರಿಗೆ ಹಾಕಿ ಹುಡಿಮಾಡಿ. ಈಗ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ೧ಕಪ್ ಶೇಂಗಾ ಹಾಕಿ ಹುರಿದು ಗರಿ ಗರಿಯಾಗುವಾಗ ತೆಗೆದಿಟ್ಟು, ನಂತರ ಸ್ವಲ್ಪ ಉದ್ದಿನಬೇಳೆ, ಸಾಸಿವೆ, ಮೆಣಸು,ಸ್ವಲ್ಪ ಎಣ್ಣೆ ಹಾಕಿ ಒಲೆಯ ಮೇಲೆ ಇಟ್ಟು ಸಾಸಿವೆ ಸಿಡಿಯುವಾಗ ಸ್ವಲ್ಪ ಕರಿಬೇವು ಹಾಕಿ ಗರಿಯಾಗುವಾಗ ಸ್ಟವ್ ಆಫ್ ಮಾಡಿ ಅದಕ್ಕೆ ಹುರಿದ ಅವಲಕ್ಕಿ, ಶೇಂಗಾ, ಮಸಾಲೆ ಹುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಡಬರಿಗೆ ಹಾಕಿಡಿ. ಈಗ ಟೀ ಜೊತೆ ತಿನ್ನಲು ರುಚಿಯಾದ ಅವಲಕ್ಕಿ ಚೂಡಾ ರೆಡಿ.

ಧನ್ಯವಾದಗಳು 🙏

ಸೋರೆಕಾಯಿ ತಿರುಳಿನ ಸಲಾಡ್ ಮೊದಲು ಸೋರೆಕಾಯಿ ತಿರುಳನ್ನು ಸಣ್ಣಗೆ ಹಚ್ಚಿ ನಂತರ ೨ಹಸಿಮೆಣಸು, ೨ಈರುಳ್ಳಿ ಯನ್ನು ಸಣ್ಣಗೆ ಹಚ್ಚಿ ೧ಬೌಲ್ ಗೆ ಹಾಕಿ ಅ...
10/09/2025

ಸೋರೆಕಾಯಿ ತಿರುಳಿನ ಸಲಾಡ್
ಮೊದಲು ಸೋರೆಕಾಯಿ ತಿರುಳನ್ನು ಸಣ್ಣಗೆ ಹಚ್ಚಿ ನಂತರ ೨ಹಸಿಮೆಣಸು, ೨ಈರುಳ್ಳಿ ಯನ್ನು ಸಣ್ಣಗೆ ಹಚ್ಚಿ ೧ಬೌಲ್ ಗೆ ಹಾಕಿ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿ. ನಂತರ ೨ಕಪ್ ಮೊಸರು ಹಾಕಿ ಸಾಸಿವೆ ಮೆಣಸಿನ ಒಗ್ಗರಣೆ ಹಾಕಿ ಈಗ ರುಚಿಯಾದ ಸೋರೆಕಾಯಿ ತಿರುಳಿನ ಸಲಾಡ್ ರೆಡಿ.

ಧನ್ಯವಾದಗಳು 🙏

ಅನ್ನದ ರೊಟ್ಟಿ  #ಅನ್ನ ಮಾಡಿರುವುದು ಉಳಿದಿದೆ ಎಂದು ಯೋಚಿಸಬೇಡಿ. ಅದನ್ನು ರೊಟ್ಟಿ ಮಾಡಿ ಎಲ್ಲರೂ ತುಂಬಾ ಇಷ್ಟ ಪಟ್ಟು ಚೆನ್ನಾಗಿ ತಿಂತಾರೆ. ಹೇಗೆ...
30/08/2025

ಅನ್ನದ ರೊಟ್ಟಿ #
ಅನ್ನ ಮಾಡಿರುವುದು ಉಳಿದಿದೆ ಎಂದು ಯೋಚಿಸಬೇಡಿ. ಅದನ್ನು ರೊಟ್ಟಿ ಮಾಡಿ ಎಲ್ಲರೂ ತುಂಬಾ ಇಷ್ಟ ಪಟ್ಟು ಚೆನ್ನಾಗಿ ತಿಂತಾರೆ. ಹೇಗೆ ಮಾಡುದು ಅಂತ ನೋಡುವಾ. ಮೊದಲು ೧ಬೇಸಿನ್ ಅನ್ನವನ್ನು ಚೆನ್ನಾಗಿ ಹಿಚುಕಿ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸಣ್ಣಗೆ ಹಚ್ಚಿದ ೨ಈರುಳ್ಳಿ, ೨ಹಸಿಮೆಣಸು, ಸ್ವಲ್ಪ ಕರಿಬೇವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ನಂತರ ೧ಬೌಲ್ ಅಕ್ಕಿಹುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಡಿ ನಂತರ ಉಂಡೆ ಮಾಡಿಟ್ಟು ೧ಸಿಕ್ತುಬಾಳೆ ಎಲೆ ಯಾ ಮೇಲಿಟ್ಟು ತಟ್ಟಿ ಇಟ್ಟುಕೊಂಡು ಒಲೆಯ ಮೇಲೆ ಕಾವಲಿ ಇಟ್ಟು ಬಿಸಿಯಾದ ಕೂಡಲೇ ಸ್ವಲ್ಪ ಎಣ್ಣೆ ಹಚ್ಚಿ ಹಾಕಿ ಎಲೆಬಾಡಿದ ಕೂಡಲೇ ಎಲೆ ತೆಗೆದು ಸ್ವಲ್ಪ ಎಣ್ಣೆ ಹಾಕಿ ಕವುಚಿ ಹಾಕಿ ಬೇಯಿಸಿ ನಂತರ ತೆಗೆದು ೧ಪ್ಲೇಟ್ ಗೆ ಹಾಕಿ ಬಿಸಿ ಬಿಸಿ ಕಾಯಿ ಚಟ್ನಿಯೊಂದಿಗೆ ತಿನ್ನಲು ರುಚಿ.ಉಳಿದ ಹಿಟ್ಟನ್ನು ಅದೇರೀತಿ ಬೇಯಿಸಿ ಕೊಳ್ಳಿ. ಈಗ ರುಚಿಯಾದ ಅನ್ನದ ರೊಟ್ಟಿ ರೆಡಿ.

ಧನ್ಯವಾದಗಳು 🙏

ಹುರಿದ ಅವಲಕ್ಕಿ  #ಮೊದಲು ಸ್ವಲ್ಪ ಕಾಯಿತುರಿದು, ೧ತುಂಡು ಬೆಲ್ಲ ಹೆರೆಸಿಟ್ಟುಕೊಳ್ಳಿ. ನಂತರ ಒಂದು ಬಾಣಲೆಗೆ ಸ್ವಲ್ಪ ಎಣ್ಣೆ, ಸ್ವಲ್ಪ ಸಾಸಿವೆ, ಜ...
24/08/2025

ಹುರಿದ ಅವಲಕ್ಕಿ #
ಮೊದಲು ಸ್ವಲ್ಪ ಕಾಯಿತುರಿದು, ೧ತುಂಡು ಬೆಲ್ಲ ಹೆರೆಸಿಟ್ಟುಕೊಳ್ಳಿ. ನಂತರ ಒಂದು ಬಾಣಲೆಗೆ ಸ್ವಲ್ಪ ಎಣ್ಣೆ, ಸ್ವಲ್ಪ ಸಾಸಿವೆ, ಜೀರಿಗೆ, ಕೊತ್ತಂಬರಿ, ಮೆಣಸು ಹಾಕಿ ಒಲೆಯ ಮೇಲೆ ಇಟ್ಟು
ಸಾಸಿವೆ ಸಿಡಿಯಾಗುವಾಗ ಸ್ವಲ್ಪ ಕರಿಬೇವು,ಶೇಂಗಾ ಹಾಕಿ ಹುರಿದು ನಂತರ ಸ್ವಲ್ಪ ಉಪ್ಪು,ಬೆಲ್ಲ, ಕಾಯಿತುರಿ ಯನ್ನು ಹಾಕಿ ಹುರಿದು ಬೆಲ್ಲ ನೀರಾಗುವಾಗ ಅವಲಕ್ಕಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಸ್ಟವ್ ಆಫ್ ಮಾಡಿ.ಈಗ ರುಚಿಯಾದ ಹುರಿದ ಅವಲಕ್ಕಿ ರೆಡಿ.

ಧನ್ಯವಾದಗಳು 🙏

ನುಗ್ಗೆಸೊಪ್ಪಿನ ಚಟ್ನಿ ಹುಡಿ  #ಮೊದಲು ನುಗ್ಗೆ ಸೊಪ್ಪನ್ನು ಬಿಡಿಸಿ ಚೆನ್ನಾಗಿ ತೊಳೆದು ೧ಬಟ್ಟೆ ಹಾಕಿಡಿ. ನಂತರ ೧ಸಣ್ಣ ಬಾಣಲೆಗೆ ೧ಟೀ ಸ್ಪೂನ್ ಕಡ...
21/08/2025

ನುಗ್ಗೆಸೊಪ್ಪಿನ ಚಟ್ನಿ ಹುಡಿ #
ಮೊದಲು ನುಗ್ಗೆ ಸೊಪ್ಪನ್ನು ಬಿಡಿಸಿ ಚೆನ್ನಾಗಿ ತೊಳೆದು ೧ಬಟ್ಟೆ ಹಾಕಿಡಿ. ನಂತರ ೧ಸಣ್ಣ ಬಾಣಲೆಗೆ ೧ಟೀ ಸ್ಪೂನ್ ಕಡ್ಲೆ ಬೇಳೆ, ೧ಟೀ ಸ್ಪೂನ್ ಉದ್ದಿನಬೇಳೆ, ೧/೨ ಸ್ಪೂನ್ ಕರಿಮೆಣಸು, ೧ಟೀ ಸ್ಪೂನ್ ಕೊತ್ತಂಬರಿ, ೧/೨ಟೀ ಸ್ಪೂನ್ ಜೀರಿಗೆ ಹಾಕಿ ಚೆನ್ನಾಗಿ ಹುರಿದುಕೊಂಡು, ನುಗ್ಗೆ ಸೊಪ್ಪನ್ನು ಹುರಿದು, ೪ಕುಮ್ಟೆಮೆಣಸು ೬ಬೆಳ್ಳುಳ್ಳಿ, ಸ್ವಲ್ಪಹುಳಿ ಸ್ವಲ್ಪ ಎಣ್ಣೆ ಹಾಕಿ ಹುರಿದ ನಂತರ ಇವೆಲ್ಲವನ್ನು ೧ಮಿಕ್ಸ್ ಜಾರಿಗೆ ಹಾಕಿ ಸ್ವಲ್ಪ ಉಪ್ಪು ಹಾಕಿ ನುಣ್ಣಗೆ ಪುಡಿ ಮಾಡಿ. ೧ ಸಣ್ಣ ಗಾಜಿನ ಜಾರಿಗೆ ಹಾಕಿಡಿ. ಈಗ ರುಚಿಯಾದ ನುಗ್ಗೆಸೊಪ್ಪಿನ ಚಟ್ನಿ ಹುಡಿ ರೆಡಿ.ಊಟ ಮಾಡುವಾಗ, ದೋಸೆಯೊಂದಿಗೆ ಹಾಕಿ ತಿನ್ನಿ.

ಧನ್ಯವಾದಗಳು 🙏

ತಂಬಿಟ್ಟು ಉಂಡೆ  #ಮೊದಲು ೧ಪಾವು ಕುಚುಲಕ್ಕಿಯನ್ನು ಚೆನ್ನಾಗಿ ಹುರಿದು ಸ್ವಲ್ಪ ತಣ್ಣಗಾಗುವಾಗ ನುಣ್ಣಗೆ ಹುಡಿ ಮಾಡಿ. ನಂತರ ೧/೨ ಟೀ ಸ್ಪೂನ್ ಏಲಕ್...
20/08/2025

ತಂಬಿಟ್ಟು ಉಂಡೆ #
ಮೊದಲು ೧ಪಾವು ಕುಚುಲಕ್ಕಿಯನ್ನು ಚೆನ್ನಾಗಿ ಹುರಿದು ಸ್ವಲ್ಪ ತಣ್ಣಗಾಗುವಾಗ ನುಣ್ಣಗೆ ಹುಡಿ ಮಾಡಿ. ನಂತರ ೧/೨ ಟೀ ಸ್ಪೂನ್ ಏಲಕ್ಕಿ ಗೆ ಸ್ವಲ್ಪ ಸಕ್ಕರೆ ಹಾಕಿ ನುಣ್ಣಗೆ ಪುಡಿಮಾಡಿ. ಈಗ ೧ಬಾಣಲೆಗೆ ೧ಲೋಟ ನೀರು ಹಾಕಿ ಒಳೆಯಮೇಲೆ ಬಿಸಿಯಾಗಲು ಇಡಿ ಅದಕ್ಕೆ ೬ ಅಚ್ಚು ಬೆಲ್ಲ ಹಾಕಿ ಬೆಲ್ಲ ನೀರಾಗುವಾಗ ಕೈ ಆಡಿಸುತ್ತಾ ಇರಿ ಬೆಲ್ಲ ಅಂಟು ಪಾಕ ಬಂದಾಗ ಅದಕ್ಕೆ ಏಲಕ್ಕಿ ಹುಡಿ,ಹುಡಿಮಾಡಿದ ಅಕ್ಕಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ತಳ ಬಿಡುವಾಗ ಸ್ಟವ್ ಆಫ್ ಮಾಡಿ ಒಂದು ಪ್ಲೇಟ್ಗೆ ಹಾಕಿ ಪೂರ್ತಿ ತಣ್ಣ ಗಾಗುವ ಮೊದಲೇ ಉಂಡೆಗಳಾಗಿ ಮಾಡಿ. ಈಗ ರುಚಿಯಾದ ತಂಬಿಟ್ಟು ಉಂಡೆ ರೆಡಿ.

ಧನ್ಯವಾದಗಳು 🙏

Address

Sulya

Website

Alerts

Be the first to know and let us send you an email when ಅಡುಗೆ ಮನೆ posts news and promotions. Your email address will not be used for any other purpose, and you can unsubscribe at any time.

Shortcuts

Share